ಓಸಿಪಿ ನ್ಯೂಟ್ರಿಕ್ರಾಪ್ಸ್

ಓಸಿಪಿ ನ್ಯುಟ್ರಿಕ್ರಾಪ್ಸ್ ಮೊರಾಕ್ಕೊ ದೇಶದ ಓಸಿಪಿ ಗುಂಪಿನ ಅಂಗ ಸಂಸ್ಥೆಯಾಗಿದ್ದು, ಜಾಗತಿಕ ಆಹಾರ ಭದ್ರತೆ ಮತ್ತು ದೀರ್ಘಕಾಲೀನ ಸ್ಥಿರತೆಯ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಮಣ್ಣಿನ ಆರೋಗ್ಯ ಮತ್ತು ಸಸ್ಯ ಪೋಷಣೆಗೆ ಸಂಬಂಧಿಸಿದ ವೈಜ್ಞಾನಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ರಂಜಕ ಉದ್ಯಮದಲ್ಲಿ 100 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ OCP ಗುಂಪಿನ ಅಪಾರ ಸಂಪನ್ಮೂಲಗಳನ್ನು ನಾವು ಬಳಸಿಕೊಳ್ಳುತ್ತೇವೆ. ಇದರಲ್ಲಿ ಜಗತ್ತಿನ ತಿಳಿದಿರುವ ಫಾಸ್ಫೇಟ್ ಸಂಗ್ರಹದ ಸುಮಾರು 70%ಕ್ಕೆ ವಿಶೇಷ ಪ್ರವೇಶ ಹಾಗೂ ವರ್ಷಕ್ಕೆ 13 ಮಿಲಿಯನ್ ಮೆಟ್ರಿಕ್ ಟನ್ ರಸಗೊಬ್ಬರ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ರಸಗೊಬ್ಬರ ಉತ್ಪಾದನಾ ಘಟಕವೂ ಸೇರಿದೆ.

ಭಾರತದ ಕೃಷಿ ಬೆಳವಣಿಗೆಯಲ್ಲಿ ದೀರ್ಘಕಾಲೀನ ಪಾಲುದಾರರು

ಓಸಿಪಿ ಹಲವು ದಶಕಗಳಿಂದ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಹೊಂದಿದ್ದು, ಉನ್ನತ ಗುಣಮಟ್ಟದ ರಂಜಕ‌ ಕಚ್ಚಾ ವಸ್ತುಗಳು ಹಾಗೂ ಸಿದ್ಧಪಡಿಸಿದ ರಸಗೊಬ್ಬರಗಳೊಂದಿಗೆ ದೇಶದ ರಸಗೊಬ್ಬರದ ವಲಯವನ್ನು ನಿರಂತರವಾಗಿ ಬೆಂಬಲಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ, ಓಸಿಪಿ ನ್ಯುಟ್ರಿಕ್ರಾಪ್ಸ್ ಭಾರತದಲ್ಲಿನ ಕೃಷಿ ವಿಜ್ಞಾನಿಗಳು, ತಜ್ಞರು ಮತ್ತು ಸ್ಥಳೀಯ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಿ, ಮಣ್ಣಿನ ಆರೋಗ್ಯ ಸುಧಾರಣೆ, ಬೆಳೆ ಉತ್ಪಾದಕತೆ ಹೆಚ್ಚಳ ಮತ್ತು ದೀರ್ಘಕಾಲಿಕ ಕೃಷಿ ಸ್ಥಿರತೆಯನ್ನು ಸಾಧಿಸಲು ಆಧುನಿಕ ಹಾಗೂ ಸ್ಥಳಾನುಕೂಲ ಗ್ರಾಹಕೀಕೃತ ಕೃಷಿ ಪದ್ಧತಿಗಳ ಅಳವಡಿಕೆಯನ್ನು ಉತ್ತೇಜಿಸುತ್ತಿದೆ.

ಕೃಷಿಕರಿಗಾಗಿ ಗ್ರಾಹಕೀಕೃತ ಪರಿಹಾರಗಳು

ರೈತ-ಕೇಂದ್ರಿತ ವಿಧಾನದೊಂದಿಗೆ, ಓಸಿಪಿ ನ್ಯೂಟ್ರಿಕ್ರಾಪ್ಸ್‌ ಭಾರತೀಯ ರೈತರಿಗೆ ನಿರ್ದಿಷ್ಟ ಬೆಳೆಯ ಅಗತ್ಯತೆಗಳು ಹಾಗೂ ಪ್ರಾದೇಶಿಕ ಪರಿಸ್ಥಿತಿಗಳ ಆಧಾರದ ಮೇಲೆ ಮಣ್ಣಿನ ಪೋಷಣೆಯನ್ನು ಸುಧಾರಿಸಲು ಸಹಾಯ ಮಾಡುತ್ತಿದೆ. ಆಧುನಿಕ ಮಣ್ಣು ವಿಶ್ಲೇಷಣೆ ಮತ್ತು ನಕ್ಷೆಕರಣ, ಗ್ರಾಹಕೀಕೃತ ರಸಗೊಬ್ಬರಗಳು, ಹಾಗೂ ಡಿಜಿಟಲ್‌ ತಂತ್ರಜ್ಞಾನಗಳ ಮೂಲಕ, ಮಣ್ಣಿನ ಆರೋಗ್ಯವನ್ನು ಉತ್ತಮಪಡಿಸಿ, ಇಳುವರಿ ಹೆಚ್ಚಿಸಿ ಮತ್ತು ಪರಿಸರವನ್ನು ಸಂರಕ್ಷಿಸುವ ಪರಿಣಾಮಕಾರಿ ಹಾಗೂ ಸ್ಥಿರ ಪರಿಹಾರಗಳನ್ನು ರೈತರಿಗೆ ಒದಗಿಸಲಾಗುತ್ತಿದೆ.

ನವೀನತೆ ಮತ್ತು ಸ್ಥಿರತೆಯತ್ತ ನಮ್ಮ ಬದ್ಧತೆ

ಓಸಿಪಿ ಗುಂಪಿನ ವೈಜ್ಞಾನಿಕ ಪರಿಣತಿ ಮತ್ತು ನವೀನ ಚಿಂತನೆಗಳನ್ನು ಬಳಸಿಕೊಂಡು, ಉತ್ಪಾದಕತೆ ಮತ್ತು ದೀರ್ಘಕಾಲೀನ ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶದಿಂದ ನಮ್ಮ ಕಾರ್ಯವಿಧಾನಗಳನ್ನು ನಿರಂತರವಾಗಿ ಸುಧಾರಿಸಲಾಗುತ್ತಿದ್ದು, ರೈತರು ಮತ್ತು ಗ್ರಾಹಕರಿಗೆ ಶಾಶ್ವತ ಮೌಲ್ಯವನ್ನು ನೀಡಲು ಹೊಸ ಆವಿಷ್ಕಾರಗಳನ್ನು ಮುಂದುವರೆಸುತ್ತೇವೆ
Scroll to Top